ವ್ಯಾಪಾರಿಗಳು ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ನಿಶ್ಚಿತ ರೂ 3000 ಗಳು ಪಿಂಚಣಿ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಭದ್ರತೆಯನ್ನು ನೀಡುವ ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಎನ್ನುವ ಒಂತಿಕೆ ಆಧಾರಿತ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೆ ತಂದಿರುತ್ತದೆ
ಯೋಜನೆಯ ಫಲಾನುಭವಿಗಳು
ಈ ಯೋಜನೆಯಡಿ ಅಂಗಡಿ ಮಾಲೀಕರು ಚಿಲ್ಲರೆ ವ್ಯಾಪಾರಿಗಳು ಎಣ್ಣೆ ಗಿರಣಿ ಮಾಲೀಕರು ವರ್ಕ್ಶಾಪ್ ಮಾಲೀಕರು ಕಮಿಷನ್ ಏಜೆಂಟ್ಸ್ ಎಸ್ಟೇಟ್ ಬ್ರೋಕರ್ಸ್ ಸಣ್ಣ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಹಾಗೂ ಅಂತಹ ಇತರೆ ಸಣ್ಣ ವ್ಯಾಪಾರಗಳಲ್ಲಿ ತೊಡಗಿಸಿಕೊಂಡ ವ್ಯಾಪಾರಿಗಳು ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು ಫಲಾನುಭವಿಗಳಾಗುತ್ತಾರೆ
ಈ ಯೋಜನೆಯನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು
- ಫಲಾನುಭವಿಯು 18 ರಿಂದ 40 ವರ್ಷದವರಾಗಿರಬೇಕು
- ಫಲಾನುಭವಿಯ ವಾರ್ಷಿಕ ವಹಿವಾಟು ಗರಿಷ್ಠರು 1.50 ಕೋಟಿ ಒಳಗಡೆ ಇರಬೇಕು
- ಫಲಾನುಭವಿಯು ಯಾವುದೇ ಆದಾಯ ತೆರಿಗೆ ಪಾವತಿಸುವವರಾಗಿರಬಾರದು
ನೋಂದಣಿ ವಿಧಾನಗಳು
- ಅರ್ಹ ಫಲಾನುಭವಿಗಳು ಹತ್ತಿರದ ಸಾಮಾನ್ಯ ಸೇವ ಕೇಂದ್ರ ಸಿಎಸ್ಸಿ ಸೆಂಟರ್ ಗಳಲ್ಲಿ ಈ ಯೋಜನೆ ಅಡಿ ನೊಂದಾಯಿಸಬಹುದಾಗಿರುತ್ತದೆ ಮತ್ತು ಹತ್ತಿರದ ಎಲ್ಐಸಿ ಶಾಖೆಗಳು , ಕಾರ್ಮಿಕ ಇಲಾಖೆ , ಕೇಂದ್ರ ಸರ್ಕಾರ ಕಾರ್ಮಿಕ ಇಲಾಖೆ ಹಾಗೂ ಅವರ ವೆಬ್ಸೈಟ್ http://locator.csccloud.in ಗಳಲ್ಲಿ ಪಡೆಯಬಹುದಾಗಿರುತ್ತದೆ.
- ಫಲಾನುಭವಿಗಳು ತಮ್ಮೊಂದಿಗೆ ಆರಂಭಿಕ ವಂತಿಕೆ ಮೊತ್ತ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಐಎಫ್ಎಸ್ಸಿ ಕೋರ್ಟ್ ವಿವರಗಳೊಂದಿಗೆ ತಮ್ಮ ನಾಮ ನಿರ್ದೇಶಕರ ವಿವರಗಳು ಮತ್ತು ಮೊಬೈಲ್ ನೊಂದಿಗೆ ಕಾಮನ್ ಸರ್ವಿಸ್ ಸೆಂಟರ್ ಗಳಿಗೆ ತೆರಳುವುದು.
- ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವಂತೆ ವಯಸ್ಸಿಗೆ ಅನುಗುಣವಾಗಿ ಆರಂಭಿಕವಂತಿಕೆಯನ್ನು ನಗದು ರೂಪದಲ್ಲಿ ಪಾವತಿಸುವುದು ಹಾಗೂ ತದನಂತರ ಮಾಸಿಕವಂತಿಕೆಯನ್ನು ಅವರ ಖಾತೆಯಿಂದ ಆಟೋ ಡೆಬಿಟ್ ಮೂಲಕ ಕಟಾವು ಮಾಡಿಕೊಳ್ಳಲಾಗುತ್ತದೆ.
- ಹೀಗೆ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಯೋಜನೆಯ ಸೌಲಭ್ಯಗಳು
- ಈ ಯೋಜನೆಯಡಿ ವಂತಿಕೆದಾರರು ಮಾಹೆಯಾನ ಪಾವತಿಸಬೇಕಾದ ವಂತಿಕೆಯನ್ನು ಯೋಜನೆಯಡಿ ತೊಡಗಿಸಿಕೊಂಡ ಫಲಾನುಭವಿಯ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಲಾಗಿದ್ದು ಅಂತಹ ದರವು ಅತ್ಯಂತ ಕಡಿಮೆ ಇದ್ದು ಕನಿಷ್ಠರು ₹55 ಹಾಗೂ ಗರಿಷ್ಠರು ₹200 ಆಗಿರುತ್ತದೆ.
- ಕೇಂದ್ರ ಸರ್ಕಾರವು ವಂತಿಕೆದಾರರು ಮಾಹೆಯಾನ ಪಾವತಿಸುವ ವಂತಿಕೆಗೆ ಸಮಾನಾಂತರವಾಗಿ ವಂತಿಕೆಯನ್ನು ಅವರವರ ಪಿಂಚಣಿ ಖಾತೆಗೆ ಪಾವತಿಸುತ್ತದೆ.
- 60 ವರ್ಷ ಪೂರ್ಣಗೊಂಡ ನಂತರ ವಂತಿಕೆದಾರರು ತಿಂಗಳಿಗೆ ನಿಶ್ಚಿತರು ₹3000 ಗಳ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ
- ಫಲಾನುಭವಿ ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದು ಅವರು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ, ಅಥವಾ ಶಾಶ್ವತ ಸಂಪೂರ್ಣ ದುರ್ಬಲತೆಯನ್ನು ಹೊಂದಿದ್ದಲ್ಲಿ, ವಂತಿಕೆಯನ್ನು ಪಾವತಿಸಲು ಸಾಧ್ಯವಾಗದಿದ್ದಲ್ಲಿ , ಅವರ ಅಥವಾ ಅವಳ ಸಂಗಾತಿಯು ತದನಂತರ ಯೋಜನೆಗೆ ಸೇರಬಹುದಾಗಿದ್ದು ವನ್ಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ ಅಥವಾ ಅವರ ವಂತಿಕೆಯನ್ನು ಬಡ್ಡಿಯೊಂದಿಗೆ ಪಡೆಯಲು ಅರ್ಹರಾಗಿರುತ್ತಾರೆ.
- ಪಿಂಚಣಿ ಆರಂಭಗೊಂಡ ನಂತರ ವಂತಿಕೆದಾರರು ಮೃತಪಟ್ಟಲ್ಲಿ ಅವರ ಪತ್ನಿ/ ಪತಿ ಪಿಂಚಣಿಯ ಶೇಕಡ 50% ರಷ್ಟು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
- ವಂತಿಕೆದಾರಾರು ಯೋಜನೆಯಿಂದ 60 ವರ್ಷ ಪೂರ್ವದಲ್ಲೇ (ಮಧ್ಯದಿಂದಲೇ) ನಿರ್ಗಮಿಸಿದಲ್ಲಿ ಅವರು ಪಾವತಿಸಿರುವ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.
- ಯೋಜನೆಯು ವಿದ್ಯುನ್ಮಾನ ಆಧಾರಿತವಾಗಿದ್ದು ಎಸ್ಎಂಎಸ್ ಮೂಲಕ ಎಲ್ಲಾ ವ್ಯವಹಾರಗಳ ಮಾಹಿತಿಯನ್ನು ಫಲಾನುಭವಿಗೆ ಕಾಲಕಾಲಕ್ಕೆ ತಿಳಿಸಲಾಗುವುದು
ನೋಂದಣಿ ಮಾಡುವ ಪ್ರಕ್ರಿಯೆಯ ವಿಧಾನಗಳು
- ಫಲಾನುಭವಿಯು ಆಧಾರ್ ಸಂಖ್ಯೆ, ಮೊಬೈಲ್ ಹ್ಯಾಂಡ್ಸೆಟ, ಸೇವಿಂಗ್ ಬ್ಯಾಂಕ್ ಅಕೌಂಟ್ ಖಾತೆ ಹಾಗೂ ಆರಂಭಿಕ ವಂತಿಕೆಯೊಂದಿಗೆ ಸಿ. ಎಸ್. ಸಿ ಗೆ ತೆರಳುವುದು.
- ಸಿ.ಎಸ್.ಸಿ ಯು ಓ.ಟಿ.ಪಿ ವಿಧಾನದ ಮೂಲಕ ವಿದ್ಯುನ್ಮಾನ ಮೂಲಕ ನೊಂದಾಯಿಸುವುದು.
- ಸಿ.ಎಸ್.ಸಿ ಯು ವಯಸ್ಸಿನ ಆಧಾರದ ಮೇಲೆ ವಂತಿಕೆಯ ಮೊತ್ತವನ್ನು ಸ್ವಯಂ ಲೆಕ್ಕಚಾರ ಮಾಡುತ್ತದೆ.
- ಫಲಾನುಭವಿಯು ವಂತಿಕೆಯ ಪ್ರಥಮ ಕಂತನ್ನು ನಗದು ರೂಪದಲ್ಲಿ ಪಾವತಿಸುವುದು.
- ಯಶಸ್ವಿ ಹಣ ಪಾವತಿ ನಂತರ ಆನ್ಲೈನ್ ವ್ಯಾಪಾರಿ ಪಿಂಚಣಿ ಸಂಖ್ಯೆಯನ್ನು ನೀಡಲಾಗುತ್ತದೆ.
- ಸ್ವೀಕೃತಿ ಮತ್ತು ಆಟೋ ಡೆಬಿಟ್ ಮ್ಯಾಂಡೇಟನ್ನು ಫಲಾನುಭವಿಯ ಸಹಿಗೆ ನೀಡಲಾಗುತ್ತದೆ.
- ಸಿ.ಎಸ್. ಸಿ ಯು ಸಹಿ ಮಾಡಿರುವ ಫಲಾನುಭವಿಯ ಡೆಬಿಟ್ ಮ್ಯಾನ್ಡೆಟ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುತ್ತಾರೆ.
- ಸಿ.ಎಸ್.ಸಿ ಯು ವ್ಯಾಪಾರಿ ಕಾರ್ಡ್ ಅನ್ನು ಪ್ರಿಂಟ್ ಮಾಡಿ ಫಲಾನುಭವಿಗೆ ನೀಡುತ್ತಾರೆ.
- ಬ್ಯಾಂಕಿನಿಂದ ದೃಢೀಕರಣ ಬಂದ ನಂತರ ಡೆಬಿಟ್ ಮ್ಯಾಂಡೇಟನ್ನು ಆಕ್ಟಿವೇಟ್ ಮಾಡಲಾಗುತ್ತದೆ ಮತ್ತು ಎಸ್.ಎಂ.ಎಸ್ ಮೂಲಕ ಫಲಾನುಭವಿಗೆ ಮಾಹಿತಿ ನೀಡಲಾಗುತ್ತದೆ.
ಉಪಯುಕ್ತವಾಗುವ ಲಿಂಕ್ ಗಳು
index | links |
---|---|
ನಮ್ಮ ವಾಟ್ಸಾಪ್ ಗ್ರುಪ್ ಸೇರಲು | Click here |
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು | Click here |