ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಕುರಿತು...
ಭಾರತದ ಒಟ್ಟು ಆದಾಯದ ಅರ್ಧದಷ್ಟು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದಲೇ ಉತ್ಪಾದನೆ ಯಾಗುತ್ತದೆ ನಮ್ಮ ದೈನಂದಿನ ಜೀವನದಲ್ಲಿ ಬಿದಿ ವ್ಯಾಪಾರಿಗಳು, ರಿಕ್ಷಾ ಎಳೆಯುವರು , ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು , ಬೀಡಿ ಕಾರ್ಮಿಕರು, ಹ್ಯಾಡ್ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೆ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡುಬರುತ್ತಾರೆ. ಈ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃತ್ತ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ - ಮಾನ್ ಧನ್ ಯೋಜನೆ (PM-SYM) ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಯೋಜನೆಯನ್ನು ಮಧ್ಯಂತರ ಬಜೆಟ್ 2019 ರಲ್ಲಿ ಘೋಷಣೆಯನ್ನು ಮಾಡಿದೆ. PM-SYM ಸ್ವಯಂ ಪ್ರೇರಿತ ಮತ್ತು ಕೊಡುಗೆಯ ಪಿಂಚಣಿ ಯೋಜನೆಯಾಗಿದ್ದು ಇದು ಅಸಂಘಟಿತ ವಲಯದಲ್ಲಿ ಸುಮಾರು 42 ಕೋಟಿ ಕಾರ್ಮಿಕರನ್ನು ತೊಡಗಿಸಿಕೊಳ್ಳುತ್ತದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಪ್ರಯೋಜನೆಗಳು
- ಕೇಂದ್ರ ಸರ್ಕಾರವು ನೊಂದಾಯಿತ ಫಲಾನುಭವಿಗಳಿಗೆ ಪಾವತಿಸುವಂತಿಕೆಗೆ ಸಮಾನಾಂತರ ವಂತಿಗೆಯನ್ನು ಪಾವತಿಸುತ್ತದೆ.
- ಕನಿಷ್ಠ ಖಚಿತವಾದ ಪಿಂಚಣಿ ಈ ಯೋಜನೆ ಅಡಿಯಲ್ಲಿ ಪ್ರತಿ ನೊಂದಾಯಿತ ಫಲಾನುಭವಿಗಳು 60 ವರ್ಷ ವಯಸ್ಸು ತುಂಬಿದ ನಂತರ ತಿಂಗಳಿಗೆ ₹3000 ಖಚಿತವಾಗಿ ಪಿಂಚಣಿಯನ್ನು ಪಡೆಯುತ್ತಾರೆ.
- ಪಿಂಚಣಿ ಪಡೆಯುವ ಸಮಯದಲ್ಲಿ ಮರಣ ಹೊಂದಿದರೆ ಫಲಾನುಭವಿಯ ಸಂಗಾತಿಯು ಪಿಂಚಣಿ ಯ ಶೇ.50% ಪ್ರತಿಶತವನ್ನು ಕುಟುಂಬ ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ( ಈ ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ಅನ್ವಯಿಸುತ್ತದೆ ).
- 60 ವರ್ಷಕ್ಕಿಂತ ಮೊದಲು ಮರಣ ಹೊಂದಿದ್ದಲ್ಲಿ ಫಲಾನುಭವಿಯು ನಿಯಮಿತ ಕೊಡುಗೆಯನ್ನು ನೀಡಿದರೆ ಮತ್ತು 60 ವರ್ಷ ವಯಸ್ಸನ್ನು ತಲುಪುವ ಮೊದಲು ಮರಣ ಹೊಂದಿದರೆ ಅವನ ಅಥವಾ ಅವಳ ಸಂಗಾತಿಯು ನಿಯಮಿತ ಕೊಡುಗೆಯನ್ನು ಪಾವತಿಸುವ ಮೂಲಕ ಯೋಜನೆಯನ್ನು ಮುಂದುವರಿಸಲು ಅರ್ಹರಾಗಿರುತ್ತಾರೆ ಅಥವಾ ನಿರ್ಗಮಿಸಬಹುದು
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಅಗತ್ಯತೆಗಳು ಮತ್ತು ಮಹತ್ವ
- ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 10 ಕೋಟಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಯೋಜನೆಯ ಲಾಭವನ್ನು ಪಡೆಯುವ ನಿರೀಕ್ಷೆ ಇದೆ.
- ಇದು ವಿಶ್ವದ ಅತಿ ದೊಡ್ಡ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ
- ಭಾರತದ ಅರ್ಧದಷ್ಟು ಜಿಡಿಪಿಯು (GDP) ಬೀದಿ ಬದಿಯ ವ್ಯಾಪಾರಿಗಳು, ಚಿಂದಿ ಆಯುವವರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ, ಚರ್ಮ ಮತ್ತು ಇತರ ಹಲವಾರು ರೀತಿಯ ಉದ್ಯೋಗಗಳಲ್ಲಿ ಕೆಲಸ ಮಾಡುವ ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರ ಬೆವರು ಮತ್ತು ಶ್ರಮದಿಂದ ಬರುತ್ತದೆ.
- ಸರ್ಕಾರ ಅವರಿಗೆ ಸಮಗ್ರ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು ಎಂಬುದು ಈ ಯೋಜನೆಯ ಮುಖ್ಯ ಅಗತ್ಯವಾಗಿದೆ.
- ಸರ್ಕಾರವು ಉದ್ಯೋಗಿಗಳ ಕೌಶಲ್ಯವನ್ನು ಹೆಚ್ಚಿಸಬೇಕು.
- ಅನೌಪಚಾರಿಕ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
- ಅನೌಪಚಾರಿಕ ಕಾರ್ಮಿಕರನ್ನು ಸೇರಿಸಲು ಕಾರ್ಮಿಕ ಕಾನೂನುಗಳನ್ನು ಬದಲಾಯಿಸಬೇಕು.
- ಇದು ಕಾರ್ಮಿಕರಿಗೆ ವೇತನ ರಕ್ಷಣೆ ಉದ್ಯೋಗ ಭದ್ರತೆ ಸಾಮಾಜಿಕ ಭದ್ರತೆಯನ್ನು ನೀಡುತ್ತದೆ ಮತ್ತು ಅಂತಿಮವಾಗಿ ಅವರು ಹೆದರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸುತ್ತದೆ.
- ಒಟ್ಟಾರೆ ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಗೆ ನೋಂದಾವಣಿಯಾಗಲು ಇರಬೇಕಾದ ಅರ್ಹತೆಗಳು
- ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು.
- ಫಲಾನುಭವಿಯು ಕಡ್ಡಾಯವಾಗಿ 18 ರಿಂದ 40 ವರ್ಷದೊಳಗಿನವರಾಗಿರಬೇಕು.
- ಫಲಾನುಭವಿಯ ಮಾಸಿಕ ಆದಾಯ 15 ಸಾವಿರ ರೂ. ಗಳಿಗಿಂತ ಕಡಿಮೆ ಆಗಿರಬೇಕು
- ಫಲಾನುಭವಿಯು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
- ಸಂಘಟಿತ ವಲಯದ ಕಾರ್ಮಿಕರಾಗಿರಬಾರದು ಹಾಗೂ ಇ.ಎಸ್.ಐ/ ಪಿ.ಎಫ್/ ಎನ್.ಪಿ.ಎಸ್ ಯೋಜನೆಗೆ ಒಳಪಟ್ಟಿರಬಾರದು.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಗೆ ನೋಂದಣಿ ಪ್ರಕ್ರಿಯೆ ಹೇಗೆ ?
- ಫಲಾನುಭವಿಯು ಅಗತ್ಯ ಮಾಹಿತಿಗಳೊಂದಿಗೆ ಕಾಮನ್ ಸರ್ವಿಸ್ ಸೆಂಟರ್ ( CSC Centre) ಗೆ ತೆರಳುವುದು.
- ಸಿಎಸ್‌ಸಿಯು ಫಲಾನುಭವಿಯನ್ನು ನೋಂದಾಯಿಸಿಕೊಳ್ಳುವುದು.
- ವಯಸ್ಸಿನ ಆಧಾರದ ಮೇಲೆ ವಂತಿಕೆಯನ್ನು ಸ್ವಯಂ ಲೆಕ್ಕಾಚಾರ ಮಾಡಲಾಗುತ್ತದೆ.
- ಪ್ರಥಮ ಕಂತನ್ನು ನಗದು ರೂಪ ಅಥವಾ ವ್ಯಾಲೆಟ್ ಮೂಲಕ ಪಾವತಿಸುವುದು.
- ಹಣ ಪಾವತಿಯು ಯಶಸ್ವಿಯಾದ ನಂತರ ಆನ್ಲೈನ್ ಶ್ರಮಯೋಗಿ ಪೆನ್ಷನ್ ಸಂಖ್ಯೆಯನ್ನು ನೀಡಲಾಗುತ್ತದೆ.
- ಸ್ವಿಕೃತಿ ಹಾಗೂ ಡೆಬಿಟ್ ಮ್ಯಾಂಡೇಟ್ ಅನ್ನು ಫಲಾನುಭವಿಯ ಸಹಿಗಾಗಿ ಜನರೇಟ್ ಮಾಡಲಾಗುವುದು.
- ಸಿ.ಎಸ್.ಸಿ ಯ ಸಿಬ್ಬಂದಿಗಳು ಸಹಿ ಮಾಡಿರುವ ಫಲಾನುಭವಿಯ ಡೆಬಿಟ್ ಮ್ಯಾಂಡೇಟ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುತ್ತಾರೆ.
- ಸಿ.ಎಸ್.ಸಿ ಯ ಸಿಬ್ಬಂದಿಗಳು ಶ್ರಮ ಯೋಗಿ ಕಾರ್ಡನ್ನು ಪ್ರಿಂಟ್ ಮಾಡಿ ಫಲಾನುಭವಿಗೆ ನೀಡುತ್ತಾರೆ.
- ಬ್ಯಾಂಕಿನಿಂದ ಧೃಡೀಕರಣ ಬಂದ ನಂತರ ಎಸ್.ಎಮ್.ಎಸ್ ಸಂದೇಶದ ಮೂಲಕ ಫಲಾನುಭವಿಗೆ ಮಾಹಿತಿ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆ ವಂತಿಕೆಯ ಚಾರ್ಟ್‍ನ ವಿವರಗಳು:
ಉಪಯುಕ್ತವಾಗುವ ಲಿಂಕ್ ಗಳು
index | links |
---|---|
ನಮ್ಮ ವಾಟ್ಸಾಪ್ ಗ್ರುಪ್ ಸೇರಲು | Click here |
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು | Click here |