ಏನಿದು ಲೇಬರ್ ಕಾರ್ಡ್…
ಬಹುಪಾಲು ಭಾರತೀಯರು ಕೃಷಿ ಮತ್ತು ದೈನಂದಿನ ಕೂಲಿಯಿಂದ ತಮ್ಮ ಜೀವನೋಪಾಯಗಳನ್ನು ಗಳಿಸುತ್ತಾರೆ. ಭಾರತ ಸರ್ಕಾರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಅವರಿಗೆ ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಗುರುತಿನ ಚೀಟಿಯನ್ನು ನೀಡಿವೆ, ಈ ಗುರುತಿನ ಚೀಟಿಯನ್ನು ಲೇಬರ್ ಕಾರ್ಡ್ ಅಥವಾ ಕಟ್ಟಡ ಕಾರ್ಮಿಕರ ಕಾರ್ಡ್ ಎಂದು ಕರೆಯಲಾಗುತ್ತದೆ ಈ ಲೇಬರ್ ಕಾರ್ಡ್ ಮೂಲಕ ಫಲಾನುಭವಿಗಳು ವಿವಿಧ ರೀತಿಯಲ್ಲಿ ಅನೇಕ ಸೇವೆಗಳನ್ನು ಮತ್ತು ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ನೋಂದಣಿ ಯಾಗಲು ಇರಬೇಕಾದ ಅರ್ಹತೆಗಳು
- ವಯೋಮಿತಿ ಕನಿಷ್ಠ 18ರಿಂದ ಗರಿಷ್ಠ ಅರವತ್ತು ವರ್ಷದೊಳಗಿನವರ ಆಗಿರಬೇಕು
- ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು
- ವರ್ಷಕ್ಕೆ 90 ದಿನಗಳ ಕಾಲ ಕೆಲಸ ಮಾಡುವ ವ್ಯಕ್ತಿಗಳು ಸಾಮಾನ್ಯವಾಗಿ ಕಾರ್ಮಿಕ ಕಾರ್ಡಿಗೆ ಅರ್ಹರಾಗಿರುತ್ತಾರೆ
- ಸೆಂಟ್ರಿಂಗ್ ಕೆಲಸ, ಗಾರೆ ಕೆಲಸ, ಸಿಮೆಂಟ್ ಕೆಲಸ, ಎಲೆಕ್ಟ್ರಿಷಿಯನ್ ಮತ್ತು ಎಲೆಕ್ಟ್ರಿಕಲ್ ಕೆಲಸ, ಪೇಂಟಿಂಗ್ ಕೆಲಸ, ಪ್ಲಂಬರ್ ಕೆಲಸ, ಬಾರ್ ಬೆಂಡರ್ ಕೆಲಸ, ಟೈಲ್ಸ್ ಕೆಲಸ, ಬಡಗಿ ಕೆಲಸ, ವೈಯರಿಂಗ್ ಕೆಲಸ, ಟವರ್ ನಿರ್ಮಾಣ ಕಾರ್ಮಿಕರು, ಕೊಳವೆ ಮಾರ್ಗ, ಒಳಚರಂಡಿ, ಮೋರಿ ಸೇತುವೆ, ರಸ್ತೆ ನಿರ್ಮಾಣ, ಡಾಂಬರೀಕರಣ ಮುಂತಾದ ಯಾವುದೇ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರದ ಈ ಕಾರ್ಮಿಕ ಕಾರ್ಡನ್ನು ನೀಡಲಾಗುತ್ತದೆ.
ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು…
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ಸಂಖ್ಯೆ
- ಕುಟುಂಬ ಸದಸ್ಯರ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆ ಭಾವಚಿತ್ರ
- ಪಡಿತರ ಚೀಟಿ (ಐಚ್ಚಿಕ)
- ವೋಟಿಂಗ್ ಕಾರ್ಡ್ (ಐಚ್ಚಿಕ)
- ಉದ್ಯೋಗ ಪ್ರಮಾಣ ಪತ್ರ (ಡೌನ್ಲೋಡ್ ಸೆಕ್ಷನ್ನಲ್ಲಿ ಲಭ್ಯವಿದೆ)
ಲೇಬರ್ ಕಾರ್ಡಿಗೆ ನೋಂದಣಿ ಆದ ಫಲಾನುಭವಿಗಳಿಗೆ ಸಿಗುವ ಸೌಲಭ್ಯಗಳು…
ಪಿಂಚಣಿ ಸೌಲಭ್ಯ
ಈ ಪಿಂಚಣಿ ಸೌಲಭ್ಯ ಯೋಜನೆಯಡಿಯಲ್ಲಿ 3 ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ ರೂ. 2000/- ದವರೆಗೆ ಸಹಾಯಧನವನ್ನು ನೀಡಲಾಗುತ್ತದೆ
ದುರ್ಬಲತೆ ಪಿಂಚಣಿ
ನೊಂದಾಯಿತ ಫಲಾನುಭವಿಯು ಕಾಯಿಲೆಯಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದರೆ ಮಾಸಿಕರು ಒಂದು ಸಾವಿರ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ಎರಡು ಲಕ್ಷದವರೆಗೆ ( 2 ಲಕ್ಷ) ಅನುಗ್ರಹ ರಾಶಿ ಸಹಾಯಧನವನ್ನು ನೀಡಲಾಗುತ್ತದೆ.
ವಸತಿ ಸೌಲಭ್ಯ (ಕಾರ್ಮಿಕ ಗ್ರಹ ಭಾಗ್ಯ)
ಈ ವಸತಿ ಸೌಲಭ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ರೂ 2,00,000/- ( 2 ಲಕ್ಷ ) ದವರೆಗೆ ಮುಂಗಡ ಸಾಲ ಸೌಲಭ್ಯ.
ಹೆರಿಗೆ ಸೌಲಭ್ಯ
ಮಹಿಳಾ ಫಲಾನುಭವಿಯ ಮೊದಲ ಎರಡು ( ಗಂಡು ಅಥವಾ ಹೆಣ್ಣು ) ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ 30,000/- ಮತ್ತು ಗಂಡು ಮಗುವಿನ ಜನನಕ್ಕೆ ರೂ 20,000/-
ಅಂತ್ಯಕ್ರಿಯೆ ವೆಚ್ಚ
ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ರೂ. 4000/- ಹಾಗೂ ಅನುಗ್ರಹ ರಾಶಿ ರೂ. 50000/- ಸಹಾಯಧನ ನೀಡಲಾಗುತ್ತದೆ.
ಶೈಕ್ಷಣಿಕ ಸಹಾಯಧನ ( ಕಲಿಕಾ ಭಾಗ್ಯ ಯೋಜನೆ ಅಡಿಯಲ್ಲಿ )
ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ
- ಒಂದು ಎರಡು ಮತ್ತು ಮೂರನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 2000/-
- ನಾಲ್ಕು ಐದನೇ ಹಾಗೂ ಆರನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 3000/-
- ಏಳನೇ ಹಾಗೂ ಎಂಟನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರೂ. 4,000/-
- 9 ಹಾಗೂ 10ನೇ ತರಗತಿ ಉತ್ತೀರ್ಣರಾದವರಿಗೆ ರೂ.10,000/-
- ಪ್ರಥಮ ಅಥವ ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ ರೂ. 15,000/-
- ಐಟಿಐ ಮತ್ತು ಡಿಪ್ಲೋಮಾ ಉತ್ತೀರ್ಣರಾದವರಿಗೆ ರೂ. 20,000/-
- ಪದವಿ ಉತ್ತೀರ್ಣರಾದವರಿಗೆ ಪ್ರತಿ ವರ್ಷಕ್ಕೆ ರೂ. 25000/-
- ಸ್ನಾತಕೋತ್ತರ ಪದವಿ ಸೇರ್ಪಡೆಗೆ ರೂ. 25000 ಹಾಗೂ ಪ್ರತಿವರ್ಷ ರೂ 10,000/- ( ಎರಡು ವರ್ಷಗಳಿಗೆ )
- ಇಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ರೂ.25000/- ಹಾಗೂ ಪ್ರತಿವರ್ಷ ತೆರ್ಗಡೆಗೆ ರೂ.20000/-
- ವೈದ್ಯಕೀಯ ಕೋರ್ಸ್ ಸೇರ್ಪಡೆಗೆ ರೂ.30,000/- ಹಾಗೂ ಪ್ರತಿ ವರ್ಷ ತೇರ್ಗಡೆಗೆ ರೂ.25000/-
- ಪಿ.ಎಚ್.ಡಿ ಕೋರ್ಸ್ಗೆ ಪ್ರತಿ ವರ್ಷಕ್ಕೆ ರೂ. 50000/- ( ಗರಿಷ್ಠ ಎರಡು ವರ್ಷಗಳು ) ಮತ್ತು ಪಿ.ಹೆಚ್.ಡಿ ಪ್ರಬಂಧ ಸ್ವೀಕಾರದ ನಂತರ ಹೆಚ್ಚುವರಿಯಾಗಿ ರೂ. 20000/-
ಪ್ರತಿಭಾವಂತ ಮಕ್ಕಳಿಗಾಗಿ
- ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75% ಅಂಕದೊಂದಿಗೆ ಉತ್ತೀರ್ಣರಾದವರಿಗೆ ರೂ. 5000/-
- ಪಿಯುಸಿ ಅಥವಾ ತತ್ಸಮಾನ ತರಗತಿಯಲ್ಲಿ ಶೇ.75% ಅಂಕದೊಂದಿಗೆ ಉತ್ತೀರ್ಣರಾದವರಿಗೆ ರೂ 7,000/-
- ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75% ಅಂಕ ಪಡೆದವರಿಗೆ ರೂ. 10,000/-
- ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಕೋರ್ಸ್ ನಲ್ಲಿ ಶೇ.75% ಅಂಕ ಪಡೆದವರಿಗೆ ರೂ. 15000/-
ವೈದ್ಯಕೀಯ ಸಹಾಯಧನ
ಈ ಯೋಜನೆ ಅಡಿಯಲ್ಲಿ ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ರೂ. 300/- ರಿಂದ ರೂ. 10 ಸಾವಿರದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನಗಳು
ಹೃದಯ ಸಂಬಂಧಿ ಕಾಯಿಲೆ ( ಹೃದ್ರೋಗ ) , ಕಿಡ್ನಿ ಜೋಡಣೆ , ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರ ಚಿಕಿತ್ಸೆ , ಪಾರ್ಶ್ವ ವಾಯು ಮೂಳೆ ಶಸ್ತ್ರ ಚಿಕಿತ್ಸೆ , ಗರ್ಭಕೋಶ ಶಸ್ತ್ರ ಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿಸಿದ ಚಿಕಿತ್ಸೆ , ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ,b ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಈ ಎನ್ ಟಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರ ಚಿಕಿತ್ಸೆ , ಅನ್ನನಾಳದ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ, ಕರುಳಿನ ಶಸ್ತ್ರ ಚಿಕಿತ್ಸೆ , ಸ್ಥನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ , ಮೂಳೆಮುರಿತ ಅಥವಾ ಚಿಕಿತ್ಸೆ ಗಳಿಗೆ ಎರಡು ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ
ಅಪಘಾತ ಪರಿಹಾರ
ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಯು ಮರಣ ಹೊಂದಿದ್ದಲ್ಲಿ 5 ಲಕ್ಷ, ಸಂಪೂರ್ಣ ಅಥವಾ ಶಾಶ್ವತ ದುರ್ಬಲತೆಯಾದಲ್ಲಿ 2 ಲಕ್ಷ ಮತ್ತು ಭಾಗಶಃ ಅಥವಾ ಶಾಶ್ವತ ದುರ್ಬಲತೆಯಾದಲ್ಲಿ ಒಂದು ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಮದುವೆ ಸಹಾಯಧನ
ನೊಂದಾಯಿತ ಫಲಾನುಭವಿಗೆ ಅಥವಾ ಅವರ ಇಬ್ಬರ ಮಕ್ಕಳ ಮದುವೆಗೆ ತಲಾ
ರೂ. 50,000/-
ಎಲ್ಪಿಜಿ ಸಂಪರ್ಕ ಸೌಲಭ್ಯ
ಈ ಯೋಜನೆ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟವ್ ಇರುವ ಗ್ಯಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಬಿಎಂಟಿಸಿ ಬಸ್ ಪಾಸ್ ಸೌಲಭ್ಯ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ ಅಥವಾ ವಾಸ ಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುತ್ತದೆ.
ಕೆ ಎಸ್ ಆರ್ ಟಿ ಸಿ ಬಸ್ ಪಾಸ್ ಸೌಲಭ್ಯ
ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಈ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುತ್ತದೆ.
ತಾಯಿ ಮಗು ಸಹಾಯ ಹಸ್ತ
ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾರ್ಷಿಕ ರೂ. 6,000/- ಗಳ ಸಹಾಯಧನವನ್ನು ನೀಡಲಾಗುತ್ತದೆ.
ಲೇಬರ್ ಕಾರ್ಡ್ ನೋಂದಣಿ ಹೇಗೆ…
ಇದೀಗ ಲೇಬರ್ ಕಾರ್ಡ್ ಅಥವಾ ಕಟ್ಟಡ ಕಾರ್ಮಿಕ ಕಾರ್ಡನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧಾನಗಳಿಂದ ಪಡೆದುಕೊಳ್ಳಬಹುದಾಗಿದೆ.
ಆನ್ಲೈನ್ ಮೂಲಕ
- ಸೇವಾ ಸಿಂಧು ವೆಬ್ ಪೋರ್ಟಲ್ ಅನ್ನು ಭೇಟಿ ನೀಡಬೇಕು.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ ನಿಮ್ಮ ಖಾತೆಯನ್ನು ತೆರೆಯಬೇಕು.
- ನಂತರ ನಿಮ್ಮ ಖಾತೆಯಿಂದ ನಿಮಗಾಗಿ ನೀಡಿದ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಮೂಲಕ ಪೋರ್ಟಲನ್ನು ಲಾಗಿನ್ ಆಗಬೇಕು.
- ಸೇವಾ ಸಿಂಧು ಹೋಮ್ ಪುಟದಲ್ಲಿ ನಿಮಗೆ ಅನೇಕ ಯೋಜನೆಗಳ ವಿವರಗಳು ಸಿಗುತ್ತದೆ ಅಲ್ಲಿ ಲೇಬರ್ ಡಿಪಾರ್ಟ್ಮೆಂಟ್ ಸೆಲೆಕ್ಟ್ ಮಾಡಿಕೊಳ್ಳಬೇಕು.
- ನಂತರ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಭರ್ತಿ ಮಾಡಬೇಕು.
- ವಿವರಗಳನ್ನು ಭರ್ತಿ ಮಾಡಿದ ಮೇಲೆ ಕೆಳಗೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
- ನಂತರ ಕೇಳುವ ಡಾಕುಮೆಂಟ್ ಪುರಾವೆಗಳನ್ನು ಅಪ್ಲೋಡ್ ಮಾಡಬೇಕು.
- ಕೊನೆಯದಾಗಿ ನಿಮ್ಮ ಆಧಾರ್ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಓಟಿಪಿಯನ್ನು ಪಡೆದುಕೊಂಡು ಆ ಒಟಿಪಿಯನ್ನು ಸಲ್ಲಿಸಿ ಸಬ್ಮಿಟ್ ಬಟನ್ ಒತ್ತಿ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಬೇಕು.
ಆಫ್ ಲೈನ್ ಮೂಲಕ
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ( ನಮ್ಮ ಡೌನ್ಲೋಡ್ ಸೆಕ್ಷನ್ನಲ್ಲಿ ಲಭ್ಯವಿದೆ ) ಅಥವಾ ಕರ್ನಾಟಕ ಕಾರ್ಮಿಕ ಇಲಾಖೆಯಿಂದ ಫಾರ್ಮನ್ನು ತೆಗೆದುಕೊಳ್ಳಬೇಕು.
- ನೋಂದಣಿ ಫಾರ್ಮ್ ನಲ್ಲಿ ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ ಸಂಬಂಧಿತ ದಾಖಲೆಗಳೊಂದಿಗೆ ಅದನ್ನು ಮಂಡಳಿಯ ಇಲಾಖೆಗೆ ಸಲ್ಲಿಸಬೇಕು.
- ಒಮ್ಮೆ ಯಶಸ್ವಿಯಾಗಿ ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ನಿಮ್ಮ ಅರ್ಜಿಯನ್ನು ಅನುಮೋದಿಸಲಾಗುತ್ತದೆ ಮತ್ತು ನಿಮಗೆ ಲೇಬರ್ ಕಾರ್ಡ್ ನೀಡಲಾಗುತ್ತದೆ.
ಕರ್ನಾಟಕದಲ್ಲಿ ಲೇಬರ್ ಕಾರ್ಡ್ ಕುರಿತು ಇರುವ ವಾಸ್ತವಗಳು ( FAQ)
ನಮ್ಮ ಲೇಬರ್ ಕಾರ್ಡಿನ ಸ್ಥಿತಿಯನ್ನು ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ ಪರಿಶೀಲಿಸಬಹುದೇ?
ಹೌದು ಇದೀಗ ನಮ್ಮ ಲೇಬರ್ ಕಾರ್ಡಿನ ಸ್ಥಿತಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮ್ಮ ಉಲ್ಲೇಖ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಿದ ಎಷ್ಟು ದಿನಗಳಲ್ಲಿ ಕಾರ್ಡ್ ಸಿಗುತ್ತದೆ.
ಒಮ್ಮೆಲೇ ಬರ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದ ನಂತರ 45 ಕೆಲಸದ ದಿನಗಳ ಒಳಗೆ ನಿಮ್ಮ ಲೇಬರ್ ಕಾರ್ಡಿನ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತದೆ.
index | links |
---|---|
ನಮ್ಮ ವಾಟ್ಸಾಪ್ ಗ್ರುಪ್ ಅನ್ನು ಸೇರಲು | Click here |
ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು | Click here |
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು | Click here |
ಡೌನ್ಲೋಡ್ ಸೆಕ್ಷನ್ ಗೆ ಹೋಗಲು | Click here |