ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಕೊಳವೆಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಯಾರೆಲ್ಲ ಈ ಯೋಜನೆ ಅನುಕೂಲ ಪಡೆಯಬಹುದು ? ಅರ್ಜಿ ಸಲ್ಲಿಕೆ ಹೇಗೆ ಎಂಬ ಪೂರ್ತಿ ವಿವರ ಇಲ್ಲಿದೆ ನೋಡಿ.
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ವೈಯಕ್ತಿಕ ನೀರಾವರಿ ಕೊಳವೆಬಾವಿ ನಿರ್ಮಾಣ ಕಾರ್ಯಕ್ಕೆ ಸಹಾಯಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಕೆ ವಿಧಾನ ಹೇಗೆ ಈ ಯೋಜನೆಗೆ ಯಾರೆಲ್ಲ ಅರ್ಹರು ಬೇಕಾಗುವ ಅಗತ್ಯ ದಾಖಲೆಗಳು ಯಾವುವು? ಈ ಎಲ್ಲಾ ವಿಷಯದ ಕುರಿತು ಇಲ್ಲಿ ಚರ್ಚಿಸಿದ್ದೇವೆ
ಏನಿದು ಗಂಗಾ ಕಲ್ಯಾಣ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಕೊಳವೆಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿ ಫಲಾನುಭವಿಗಳ ಕೃಷಿ ಭೂಮಿಯಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ಕೊಳವೆಬಾವಿ ಕೊರೆಸಿ ನಂತರ ನೀರು ಸಂಗ್ರಹಿಸಲು ಟ್ಯಾಂಕನ್ನು ನಿರ್ಮಿಸಿಕೊಟ್ಟು ಅದಕ್ಕೆ ಅಳವಡಿಸಿದ್ದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತದೆ , ಅಂದರೆ ಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ.
ಈ ಯೋಜನೆಯಡಿಯಲ್ಲಿ 1 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆ ಬಾವಿ ಕೊರೆಸಿ ಅದಕ್ಕೆ ನಿಗಮದಿಂದ ಪಂಪ್ಸೆಟ್ ಅಳವಡಿಸಿಕೊಡಲಾಗುತ್ತದೆ ಮತ್ತು ವಿದ್ಯುತ್ ಕರಣ ಸೇರಿ ಒಟ್ಟು ವೆಚ್ಚ ರೂ. 1.50 ಲಕ್ಷ ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ವೈಯಕ್ತಿಕ ಕೊಳವೆ ಬಾವಿ ಯೋಜನೆ
ಈ ಯೋಜನೆಗೆ ಸರ್ಕಾರವು 2 ಲಕ್ಷ ನಿಗದಿಪಡಿಸಿದೆ ಈ ಮೊತ್ತದಲ್ಲಿ ಕೊಳವೆ ಬಾವಿಯು ಕೊರೆಯುವಿಕೆ ಪಂಪ್ಸೆಟ್ ಸರಬರಾಜು ಮತ್ತು ವಿದ್ಯುತ್ಕರಣ ಠೇವಣಿ ಮೊತ್ತವನ್ನು ಭರಿಸಲಾಗುತ್ತದೆ, ಬೆಂಗಳೂರು ಗ್ರಾಮಾಂತರ ಕೋಲಾರ್ ಚಿಕ್ಕಬಳ್ಳಾಪುರ ರಾಮನಗರ ತುಮಕೂರು ಜಿಲ್ಲೆಗೆ 3.50 ಲಕ್ಷ ಸಹಾಯಧನ ನಿಗದಿಪಡಿಸಲಾಗಿದೆ ಇದರಲ್ಲಿ 50,000 ಹಣವನ್ನು ವಿದ್ಯುತ್ ಕರಣ ವೆಚ್ಚಕ್ಕೆ ಮೀಸಲಿರಿಸಲಾಗಿದೆ.
ಈ ಸೌಲಭ್ಯ ಪಡೆಯಲು ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂದರೆ ಪ್ರತಿ ಫಲಾನುಭವಿಗೆ ಒಂದು ಎಕರೆ 20 ಗುಂಟೆ ( ಒಂದು ಎಕರೆ 50ಸೆನ್ಸ್ ಎಕರೆಯಿಂದ 5ಫ್ ಎಕರೆಯವರೆಗೆ ಕೃಷಿ ಇರಬೇಕು) ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು, 168 ಬಿ ಎಂ ಎಸ್ 2010 ದಿನಾಂಕ 25-7-2011 ರಲ್ಲಿ ಸೂಚಿಸಿರುವಂತೆ ಮಡಿಕೇರಿ ಮಂಗಳೂರು ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಗರಿಷ್ಠ ಒಂದು ಎಕರೆ ಜಮೀನನ್ನು ಹೊಂದಿರತಕ್ಕದ್ದು ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಅರ್ಜಿ, ಮೂರು ಭಾವಚಿತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ರೇಷನ್ ಕಾರ್ಡ್, ರೆಕಾರ್ಡ್ ಆಫ್ ರೈಟ್ಸ್ ಪಡೆದು ಆಯ್ಕೆ ಸಮಿತಿಯಲ್ಲಿ ಮಂಡಿಸಿ ನಿಗದಿಪಡಿಸಿದಾಗ ಆಯ್ಕೆ ಮಾಡಲಾಗುವುದು.
ಈ ಯೋಜನೆಯ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು
- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಪ್ರಾರಂಭಿಸಲಾಗಿದೆ
- ಕೊಳವೆಬಾವಿಗಳನ್ನು ಕೊರೆಯುವ ಅಥವಾ ತೆರೆದ ಬಾವಿಗಳನ್ನು ಅಗೆಯುವ ಮೂಲಕ ಈ ಯೋಜನೆಯ ಮೂಲಕ ಫಲಾನುಭವಿಗಳು ಕೃಷಿ ಆಸ್ತಿಯ ಮೇಲೆ ನೀರಾವರಿ ಸೌಲಭ್ಯಗಳನ್ನು ಪಡೆಯುತ್ತಾರೆ. ನಂತರ ಪಂಪ್ಸೆಟ್ ಮತ್ತು ಪರಿಕರಗಳನ್ನು ಅಳವಡಿಸುತ್ತಾರೆ.
- ವೈಯಕ್ತಿಕ ಬೋರ್ವೆಲ್ ಯೋಜನೆಗೆ ಸರ್ಕಾರ ₹1.50 ಲಕ್ಷ ಹಾಗೂ 3 ಲಕ್ಷ ನೀಡಿದೆ.
- ಈ ಮೊತ್ತವನ್ನು ಬೋರ್ವೆಲ್ ಕೊರೆಯುವಿಕೆ ಪಂಪ್ ಪೂರೈಕೆ ಮತ್ತು ರೂ 50,000 ವಿದ್ಯುತ್ ಕರಣ ಠೇವಣಿಗಾಗಿ ಬಳಸಲಾಗುತ್ತದೆ.
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ₹3.50 ಲಕ್ಷ ಸಹಾಯಧನ ನೀಡಲಾಗುವುದು, ಉಳಿದ ಜಿಲ್ಲೆಗಳಿಗೂ ₹2 ಲಕ್ಷ ಸಹಾಯಧನ ನೀಡಲಾಗುವುದು.
- ನೀರಿನ ಮೂಲಗಳಿಂದ ಪೈಪುಗಳನ್ನು ಎಳೆಯುವ ಮೂಲಕ ಮತ್ತು ಪಂಪ್ ಮೋಟಾರ್ ಗಳು ಮತ್ತು ಪರಿಕರಗಳನ್ನು ಸ್ಥಾಪಿಸುವ ಮೂಲಕ ನೆರೆಯ ನದಿಗಳಿಂದ ರೈತರ ಒಡೆತನದ ಆಸ್ತಿಗಳಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತದೆ.
- 8 ಎಕರೆ ವರೆಗಿನ ಜಮೀನಿಗೆ ₹4 ಲಕ್ಷ ಹಾಗೂ 15 ಎಕ್ಕರವರೆಗಿನ ಜಮೀನಿಗೆ ₹6 ಲಕ್ಷ ವೆಚ್ಚದಲ್ಲಿ ಘಟಕ ವೆಚ್ಚ ನಿಗದಿ ಮಾಡಲಾಗಿದೆ.
- ವ್ಯವಸ್ಥೆಯ ಅಡಿಯಲ್ಲಿ ಸಂಪೂರ್ಣ ವೆಚ್ಚವನ್ನು ಸಬ್ಸಿಡಿ ಎಂದು ಪರಿಗಣಿಸಲಾಗುತ್ತದೆ.
- ದೀರ್ಘಕಾಲಿನ ನೀರಿನ ಮೂಲಗಳು ಲಭ್ಯವಿಲ್ಲದಿದ್ದರೆ ಸಂಸ್ಥೆಯು ನೀರಿನ ತಾಣಗಳಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಲು ವ್ಯಕ್ತಿಗಳಿಗೆ ಸಾಲವನ್ನು ನೀಡುತ್ತದೆ.
- ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ನಿಗಮವು ಕಳವೆಬಾವಿ ನಿರ್ಮಿಸಲು ಒಟ್ಟು ₹1.50 ಲಕ್ಷ ನೀಡುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಫಲಾನುಭವಿಯು ಮತಿಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು
- ರಾಜ್ಯದ ಖಾಯಂ ನಿವಾಸಿ ಆಗಿರಬೇಕು ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು
- ಫಲಾನುಭವಿಯ ವಾರ್ಷಿಕ ಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಿಗೆ 81,000 ಹಾಗೂ ನಗರ ಪ್ರದೇಶಗಳಲ್ಲಿ 1.3 ಲಕ್ಷ ಮೀರಿರಬಾರದು.
- ಅರ್ಜಿದಾರರು ಆಧಾರ್ ಕಾರ್ಡ್ ಚುನಾವಣಾ ಗುರುತಿನ ಚೀಟಿ ಪಡಿತರ ಚೀಟಿಯನ್ನು ಹೊಂದಿರಬೇಕು.
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ಒಳಗೆ ಇರಬೇಕು.
ಈ ಯೋಜನೆಗೆ ಅಗತ್ಯವಾದ ದಾಖಲೆಗಳು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಇತ್ತೀಚಿನ ಆರ್ ಟಿ ಸಿ
- ಪಡಿತರ ಚೀಟಿ
- ಚುನಾವಣಾ ಗುರುತಿನ ಚೀಟಿ
- ಸಣ್ಣ ಅಥವಾ ಅತಿ ಸಣ್ಣ ಹಿಡುವಳಿದಾರ ಧಡೀಕರಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಭೂ ಕಂದಾಯ ಪಾವತಿಸಿದ ರಶೀದಿ
- ಸ್ವಯಂಘೋಷಣಾ ಪತ್ರ/ಜಾಮೀನುದಾರರ ಸ್ವಯಂ ಘೋಷಣಾ ಪತ್ರ
ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ
ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವ ಕ್ರಮವನ್ನು ಹಂತ ಹಂತವಾಗಿ ವಿವರಿಸಲಾಗಿದೆ.
ಹಂತ - 1: ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ https://kmdc.karnataka.gov.in/ ಗೆ ಭೇಟಿ ನೀಡಿ.
ಹಂತ - 2: ಮುಖಪುಟದಲ್ಲಿ ಆನ್ಲೈನ್ ಸರ್ವಿಸಸ್ ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಕೆಳಗೆ ತೋರಿಸುವ ಆನ್ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ - 3: ನಂತರ ನೊಂದಣಿಗೆ ನೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆನ್ಲೈನ್ ಅಪ್ಲಿಕೇಶನ್ ಪುಟವು ತೆರೆಯುತ್ತದೆ ಗಂಗಾ ಕಲ್ಯಾಣ ಯೋಜನೆ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ಬಟನ್ ಒತ್ತಿರಿ.
ಹಂತ - 4: ನೇರ ಲಿಂಕ್ - https://kmdc.kar.nic.in/loan/Login.aspx.
ಹಂತ - 5: ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ KMDC ಕರ್ನಾಟಕ ಲೋನ್ ಲಾಗಿನ್ ಪುಟ ಕಾಣಿಸಿಕೊಳ್ಳುತ್ತದೆ.
ಹಂತ - 6: ಈ ಪುಟದಲ್ಲಿ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಆನ್ಲೈನ್ ಅರ್ಜಿ ನಮೂನೆಯನ್ನು ತೆರೆಯಲು ಗಂಗಾ ಕಲ್ಯಾಣ ಯೋಜನೆ ಲಿಂಕನ್ನು ಕ್ಲಿಕ್ ಮಾಡಿ.
ಈ ಯೋಜನೆ ಕುರಿತು ಸಂಪರ್ಕಿಸಬಹುದಾದ ವಿವರಗಳು
- ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ
- ಮುಖಭಟವು ಈಗ ನಿಮ್ಮ ಮುಂದೆ ಹೊರಹೊಮ್ಮುತ್ತದೆ ನೀವು ಈಗ ನಮ್ಮನ್ನು ಸಂಪರ್ಕಿಸಿ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕು.
- ನಿಮಗೆ ಈ ಕೆಳಗಿನ ಆಯ್ಕೆಗಳನ್ನು ಒದಗಿಸಲಾಗುತ್ತದೆ.
- ಜಿಲ್ಲಾಧಿಕಾರಿಗಳ ಸಂಪರ್ಕ ಮಾಹಿತಿ
- ಅಧಿಕಾರಿಗಳ ಕಡೆಯ ಪ್ರಧಾನ ಕಚೇರಿ
- ಮುಖ್ಯ ಕಚೇರಿ
ಉಪಯುಕ್ತವಾಗುವ ಲಿಂಕ್ ಗಳು
index | links |
---|---|
ಆನ್ಲೈನ್ ಅರ್ಜಿ ಸಲ್ಲಿಸಲು | Click here |
ನಮ್ಮ ವಾಟ್ಸಾಪ್ ಗ್ರುಪ್ ಸೇರಲು | Click here |
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು | Click here |
ಡೌನ್ಲೋಡ್ ಸೆಕ್ಷನ್ ಗೆ ಹೋಗಲು | Click here |